Tourism
ವಿಶ್ವಬಂಧು, ಸಂತ ಕವಿ ಕನಕದಾಸರು

ಕರ್ನಾಟಕದಲ್ಲಿ ಹರಿದಾಸ ಪರಂಪರೆಗೆ ಸುಮಾರು ಐದು ನೂರು ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರಂಥ ವೈಚಾರಿಕ ಸಂತರಿಂದಾಗಿ ಸಮಾಜದ ಮೇಲು-ಕೀಳು, ಜಾತಿ-ಮತಗಳ ಸಿದ್ಧಾಂತ ಬದಿಗೆ ಸರಿಯಿತು. ದೇವಸ್ತುತಿಯೇ ಮುಖ್ಯವೆನಿಸಿದ್ದ ಭಕ್ತಿ ಪರಂಪರೆಯ ಕಾಲದಲ್ಲಿ ಧ್ರುವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದರು.
ದಾಸ ಸಾಹಿತ್ಯದ ಮೂಲಕ ಸಾಹಿತ್ಯವನ್ನು ಇನ್ನಷ್ಟು ಸರಳಗೊಳಿಸಿದ, ಕನ್ನಡ ಸಾಹಿತ್ಯಕ್ಕೆ ಹೊಸತನ ತುಂಬಿದ ಕನಕದಾಸರನ್ನು ಹೊಸಗನ್ನಡ ಸಾಹಿತ್ಯ ಕೋಗಿಲೆ ಎಂದು ದಾಸ ಸಾಹಿತ್ಯ ಬಸವ ಕೋಗಿಲೆ ಎಂದು ಪ್ರಾಜ್ಞರು ಕರೆದುದುಂಟು. ಕನ್ನಡ ಸಾಹಿತ್ಯದಲ್ಲಿ 16ನೇ ಶತಮಾನದ ದಾಸ ಸಾಹಿತ್ಯ ಹೆಚ್ಚು ಜನಮುಖಿಯಾದವು. ಜಾತಿ-ನೀತಿಯ ಉಡದ ಪಟ್ಟಿನ ನಡುವೆಯೂ ಕನಕದಾಸರು, ಜನತೆಯಲ್ಲಿ ಸಾಮಾಜಿಕ ಚಿಂತನೆ, ಕಾವ್ಯ ಮತ್ತು ಕೀರ್ತನೆಗಳ ಮೂಲಕ ಸಾಹಿತ್ಯ ಹಾಗೂ ಸಂಗೀತಕ್ಕೆ ಮಹತ್ತರ ಕಾಣಿಕೆ ಸಲ್ಲಿಸಿ, ದಾಸ ಸಾಹಿತ್ಯದ ತೂಕವನ್ನು ಮತ್ತಷ್ಟು ಹೆಚ್ಚಿಸಿದರು.
ಕನಕದಾಸರು (1508-1606) ಸಾಮಾನ್ಯವಾದ ಕುರುಬ ಜಾತಿಯಲ್ಲಿ ಹುಟ್ಟಿದರೂ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ಹಿರಿಮೆ ಗಳಿಸಿದವರು. ಕನಕರು ಕೆಳಸ್ತರದಿಂದ ಬಂದವರಾದ್ದರಿಂದ, ಕೆಳಜಾತಿಯವರ ನೋವಿನ ಅರಿವು ಹಾಗೂ ಡಣ್ಣಾಯಕ (ಒಂದು ಪ್ರದೇಶದ ಮುಖ್ಯಸ್ಥ) ರಾಗಿದ್ದರಿಂದ ಮೇಲ್ವರ್ಗದ ಜೀವನದ ಅನುಭವ ಅವರದಾಗಿತ್ತು.5ನೆಯ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶ ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ಅಂದಿನ 28 ಗ್ರಾಮಗಳ ಹೋಬಳಿಯಾಗಿತ್ತು. ಅದರ ನಾಡಗೌಡಿಕೆ ಮತ್ತು ಹೊಣೆಗಾರಿಕೆಯನ್ನು ವಿಜಯನಗರದ ಅರಸರು ತಿಮ್ಮಪ್ಪನ ಹೆಗಲಿಗೇರಿಸಿದರು. ಕಾಲಾಂತರದಲ್ಲಿ ಡಣ್ಣಾಯಕತ್ವ ಕನಕನ ಕೈತಪ್ಪಿ ಹೋಯಿತು. ಆದರೂ ಈತನ ನಿಯತ್ತು ನಿ:ಸ್ವಾರ್ಥತನಕ್ಕೆ ಮತ್ತೆ ಅದು ಈತನ ಮುಡಿಗೇರಿತು. ಈ ನಡುವೆ ಕನಕನಿಗೆ ಮದುವೆಯಾಗಿ, ಪುತ್ರ ಭಾಗ್ಯ ಉಂಟಾಯಿತು.ಕಾಲನ ಆಟದಲ್ಲಿ ಕೆಲ ಕಾಲದಲ್ಲೇ ಕನಕ ಮಗು ಮತ್ತು ತಾಯಿಯನ್ನು ಕಳೆದುಕೊಂಡ. ಕನಕ ಈ ನೋವಿನಿಂದ ಹೊರಬಂದು, ಲೌಕಿಕತೆಯಿಂದ ಪಾರಮಾರ್ಥಿಕದತ್ತ ತಿರುಗಿದ. ಭೌತಿಕ, ಆಸೆ ಆಕಾಂಕ್ಷೆಗಳಿಂದ ದೂರವಾದ. ಈ ಹಂತದಲ್ಲೇ ಕನಕಪ್ಪ ಬಾಡದಿಂದ, ತಾನು ನಂಬಿ ಪೂಜಿಸುತ್ತಿದ್ದ ದೈವ ಬಾಡದ ಆದಿಕೇಶವನನ್ನು ಕಾಗಿನೆಲೆಗೆ ತಂದು ಪ್ರತಿಷ್ಠಾಪಿಸಿಯಾಗಿತ್ತು. ಆತನ ಆರಾಧನೆಯಲ್ಲಿ ಸಂತೋಷ ಕಾಣುತ್ತ, ತನ್ನ ಕಾವ್ಯ ಕೃಷಿ ಮುಂದುವರಿಸಿದರು.
ಶಿಶುನಾಳ ಶರೀಫರು

ಶಿಶುನಾಳ ಶರೀಫರು: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ.ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾದಿದರು. ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟ ರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಡಿದರು.ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು.ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು.ಶರೀಫರ ಮರಣದ ತರುವಾಯ ಅವರ ಅಂತ್ಯಕ್ರಿಯೆಯು ಹಿಂದು ಹಾಗು ಮುಸಲ್ಮಾನ ಭಕ್ತರ ಸಮ್ಮುಖದಲ್ಲಿ ನೆರವೇರಿತು. ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ. ಕನ್ನಡದ ಖ್ಯಾತ ಹಾಡುಗಾರ ಶ್ರೀ ಅಶ್ವಥ್ಥರು ಇವರ ಅನೇಕ ಪದಗಳನ್ನು ಹಾಡಿದ್ದಾರೆ. (ಆಕರ: “ಬರಕೋ ಪದಾ ಬರಕೋ” ಸಂಪಾದನೆ: ಡಾ| ಶಿವಾನಂದ ಗುಬ್ಬಣ್ಣವರ)" ಇಂದ ಡೆಯಲ್ಪಟ್ಟಿದೆ.
Gotagodi Park
Gotagodi is located on the Pune-Bangalore National Highway 4 and is 04 kms from Shiggaon. The village of sculptures is called ‘Utsava Rock Garden’ set up by the Dasanur Samuha. The village is the result of the hard work of Prof Tippanna Solabakkanavar and his team, which has created many such sculptures across the state. The permission of the Tourism Department has been sought by the builders of the garden, but is entirely private-funded. The principal attraction of the rock garden is a circle named after Kannada actor Rajkumar. Then there are sculptures of the characters that the actor essayed in several Kannada films over the decades. This art village also has unique seating arrangements such as benches for people to take in the installations.
Dairy farming, cattle, shepherds, cowherds, poultry are all depicted by way of statues here.
Then, there are also trees, wildlife all in the form of installations at the art village.
Rural lifestyle has been so well portrayed that one is bound to stop and give a second look at all the statues. There are portrayals of rural women at work, (sweeping, winnowing etc), blacksmiths, potters, shop-keepers, astrologers, rope maker, bangle sellers and washermen at the village. This rock garden provides a great picture of how rural life was, in pre-Independence India. At that point, villages did not have exclusive school buildings. Classes were conducted inside temples. Such classes were called ‘Saligudi’. “We will soon create one such school here,” explains Solabakkanavar.
Apart from these depictions, the rock garden also has new art installations in the form of terracotta sculptures.
The sculptures here also depict the North Karnataka way of life, including the farmers of the region. Solabakkanavar also plans to introduce visitors to North Karnataka culture, cuisine and art forms.





| This page is maintained by : Junior Programmer TMC Shiggaon |
|Last Updated : 05/06/2012| .

